ನೇಹ ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ನೀಲಂಶಂಕರ್ ಅವರು ನಿರ್ಮಿಸಿರುವ ‘ಕಾಫ಼ಿ ವಿತ್ ಮೈ ವೈಫ಼್‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮದನ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ವಿದ್ಯಾಸಾಗರ್ ನಿರ್ದೇಶಿದ್ದಾರೆ. ನೃತ್ಯ ನಿರ್ದೇಶನವನ್ನು ವಿದ್ಯಾಸಾಗರ್ ಅವರೇ ಮಾಡಿದ್ದಾರೆ. ಮಂತ್ರ ಆನಂದ್ ಸಂಗೀತ ನಿರ್ದೇಶನದ ‘ಕಾಫ಼ಿ ವಿತ್ ಮೈ ವೈಫ಼್‘ಗೆ ವಿಶ್ವೇಶ್ವರ ಅವರ ಛಾಯಾಗ್ರಹಣವಿದೆ. ಕಾರ್ತಿಕ್ ಶ್ರೀನಿವಾಸ್ ಸಂಕಲನ, ಎನ್.ಚಂದ್ರಶೇಖರ್ ಹಾಗೂ ಮಂಜಯ್ಯರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ರಿಚರ್ಡ್ಲೂಯಿಸ್ ಸಂಭಾಷಣೆ ಬರೆದಿದ್ದಾರೆ.
ಅನೀಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಸಿಂಧೂಲೋಕನಾಥ್. ಕುಮುದ, ಪದ್ಮಿನಿ, ರಿಚರ್ಡ್ಲೂಯಿಸ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.